ಮಾರುತಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಾರುತಿ ಜಡಿಯವರ್ ಅವರು ನಿರ್ಮಿಸಿರುವ ‘ಸ್ಟೈಲ್ ಕಿಂಗ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮಾಸಾಂತ್ಯಕ್ಕೆ ಅಥವಾ ಮೇ ಮೊದಲವಾರದಲ್ಲಿ ತೆರೆಗೆ ಬರಲಿದೆ.
ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ. ರಮ್ಯಾ ನಂಬಿಸನ್ ಈ ಚಿತ್ರದ ನಾಯಕಿ. ರಂಗಾಯಣ ರಘು, ಸಾಧುಕೋಕಿಲ, ಪದ್ಮಜಾರಾವ್, ಮಿತ್ರ, ಗಿರೀಶ್, ಅಮಿತ್ ಮುಂತಾದವರು ‘ಸ್ಟೈಲ್ ಕಿಂಗ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಟರಾಜ್.ಜಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಸಂತೋಷ್ ಪಾಂಡಿ ಅವರ ಛಾಯಾಗ್ರಹಣವಿದೆ. ಸರವಣನ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಬಾಬಾ ಭಾಸ್ಕರ್ ನೃತ್ಯ ನಿರ್ದೇಶನ ಹಾಗೂ ಅಭಿಮನ್ಯು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.